Puttajji puttajji kathe helu | ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು

ಹಾಡು ಹಕ್ಕಿ ಪಲ್ಲವಿ ಅರುಣ್ ಕತೆ ಕೂಡಾ ಹೇಳ್ತಾರಾ..? ನಾ ಡಿಸೋಜಾರ ಪುಟಾಣಿ ಕತೆಗಳು ನಿಮಗಾಗಿ

ನಾ ಡಿಸೋಜಾ

ಲೇಖಕರು

ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ನಾ ಡಿಸೋಜಾ ಕನ್ನಡದ ಹಿರಿಯ ಬರಹಗಾರ. ತಮ್ಮ ಕತೆ, ಕಾದಂಬರಿಗಳಿಂದ ಜನಪ್ರಿಯತೆ ಗಳಿಸಿರುವ ನಾ ಡಿ ಯವರ ಮತ್ತೊಂದು ಹೆಮ್ಮೆಯ ಕೆಲಸ ಮಕ್ಕಳ ಬರಹಗಳು. ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಕುರಿತು ಗಂಭೀರವಾಗಿ ಬರೆಯುತ್ತಿರುವ ಕೆಲವೇ ಲೇಖಕರಲ್ಲಿ ನಾ ಡಿ ಕೂಡ ಒಬ್ಬರು. ಮುಳುಗಡೆ, ದ್ವೀಪ ಅವರ ಪ್ರಮುಖ ಕಾದಂಬರಿಗಳು. ಅವರು ಮಕ್ಕಳ ಸಾಹಿತ್ಯಕ್ಕಾಗಿ ಮಾಡಿರುವ ಕೆಲಸವನ್ನ ಗೌರವಿಸುತ್ತ ಅವರ ಎರಡು ಮಕ್ಕಳ ಕತೆಗಳನ್ನ ಇಲ್ಲಿ ಬಳಸಿಕೊಳ್ಳಲಾಗಿದೆ.

ಎಮ್ ಡಿ ಪಲ್ಲವಿ ಅರುಣ್

ಓದಿದವರು

ಕನ್ನಡ ಸುಗಮ ಸಂಗೀತದ ಚಿರಪರಿಚಿತ ಹೆಸರು ಎಮ್ ಡಿ ಪಲ್ಲವಿ. ಸಾಕಷ್ಟು ಸಿನೆಮಾಗಳಲ್ಲೂ ಅಭಿನಯಿಸಿರುವ ಇವರು ಮಾಯಾಮೃಗದ ತಮ್ಮ ಪಾತ್ರದಿಂದ ರಾಜ್ಯಾದ್ಯಂತ ಜನಪ್ರಿಯರಾದವರು. ಗರ್ವ ಆಕೆಯ ಅಭಿನಯದ ಇನ್ನೊಂದು ಶ್ರೇಷ್ಠ ಧಾರಾವಾಹಿ. ದುನಿಯಾ ಚಿತ್ರದ ನೋಡಯ್ಯ ಕ್ವಾಟೆ ಲಿಂಗವೇ ಹಾಡಿಗೆ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ರಂಗಭೂಮಿಯಲ್ಲೂ ಸಾಕಷ್ಟು ಕೆಲಸ ಮಾಡಿರುವ ಇವರು ಹ್ಯಾಮ್ಲೆಟ್, ಮಾನಿಷಾದ, ಅಗ್ನಿ ಮತ್ತು ಮಳೆಯಂತಹ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಪ್ರಕಾಶ್ ಬೆಳವಾಡಿಯವರ ಸ್ಟಂಬಲ್ ಚಿತ್ರದಲ್ಲಿ ಅಭಿನಯದ ಜೊತೆಗೆ ಚಿತ್ರಕತೆ ಮತ್ತು ನಿರ್ದೇಶನ ವಿಭಾಗದಲ್ಲೂ ದುಡಿದಿದ್ದಾರೆ. ಈ ಕಥಾ ಶ್ರಾವ್ಯ ಯೋಜನೆಯಲ್ಲಿ ನಾ ಡಿಸೋಜಾರ ಎರಡು ಮಕ್ಕಳ ಕತೆಗಳನ್ನ ನಮಗಾಗಿ ಓದಿದ್ದಾರೆ.

ಶ್ರೀಕಾಂತ್ ಗೋಪಾಲ್ ಕೃಷ್ಣ

ಹಿನ್ನಲೆ ಸಂಗೀತ

ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಶ್ರೀಕಾಂತ್ ಅವರು ಓದಿದ್ದು ಮೆಕಾನಿಕಲ್ ಇಂಜಿನಿಯರಿಂಗ್. ಒಗಟುಗಳನ್ನು ಬಿಡಿಸುವುದು, ತಂತ್ರಜ್ಞಾನದ ಬಗ್ಗೆ ಅರಿತುಕೊಳ್ಳುವುದು ಹಾಗೂ ಛಾಯಾಗ್ರಹಣ ಇವರ ಆಸಕ್ತಿಗಳು. ಇವೆಲ್ಲದರ ಜೊತೆಗೆ ಸಂಗೀತ ನಿರ್ದೇಶನ ಅದರಲ್ಲೂ ಹಿನ್ನೆಲೆ ಸಂಗೀತದತ್ತ ಇವರಿಗೆ ಅಪಾರ ಒಲವಿದೆ.