Description

ಲೇಖಕರು : ಪೂರ್ಣ ಚಂದ್ರ ತೇಜಸ್ವಿ
ಕರ್ನಾಟಕದ ಶ್ರೇಷ್ಟ ಬರಹಗಾರರ ಪಟ್ಟಿಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಲೇಖಕ ತೇಜಸ್ವಿ. ನವ್ಯ, ನವೋದಯದಿಂದ ಹೊರತಾದ ತಮ್ಮದೇ ಶೈಲಿಯಲ್ಲಿ ಬರವಣಿಗೆಗೆ ತೊಡಗಿದ ತೇಜಸ್ವಿ ಕನ್ನಡದ ಮಹತ್ವ ಕತೆಗಾರರಲ್ಲಿ ಒಬ್ಬರು. ಕತೆ, ಕಾದಂಬರಿಗಳ ಜೊತೆಗೆ ಹಕ್ಕಿಗಳ ಕುರಿತು, ವೈಜ್ನಾನಿಕ ವಿಚಾರಗಳ ಕುರಿತು ಬರೆದಿರುವ ತೇಜಸ್ವಿ ಅಳಿದ ಮೇಲೂ ಜನ ಮಾನಸದಲ್ಲಿನ್ನೂ ಚಿರಸ್ಥಾಯಿಯಾಗಿ ಉಳಿದಿರುವ ಬರಹಗಾರ. ಪಂಪ ಪ್ರಶಸ್ತಿ ಸಹಿತ ಹಲವು ಪ್ರಮುಖ ಪ್ರಶಸ್ತಿ ಪಡೆದುಕೊಂಡಿರುವ ಇವರ ಪ್ರಮುಖ ಕೃತಿಗಳು ಕರ್ವಾಲೋ, ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಮಾಯಾಲೋಕ. ಅವರ ಡೇರ್ ಡೆವಿಲ್ ಮುಸ್ತಫಾ ಕತೆಯನ್ನಿಲ್ಲಿ ಬಳಸಿಕೊಳ್ಳಲಾಗಿದೆ.

ಓದಿದವರು : ಸುಚೇಂದ್ರ ಪ್ರಸಾದ್
ಸ್ವಚ್ಚ ಕನ್ನಡವನ್ನ ಮಾತನಾಡುವ ಸುಚೆಂದ್ರ ಪ್ರಸಾದ್ ಕರ್ನಾಟಕದ ಪ್ರಬುದ್ಧ ನಟ, ನಿರ್ದೇಶಕ. ಬೆಟ್ಟದ ಜೀವ, ಡ್ರಾಮಾ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಸುಚೇಂದ್ರ ಪ್ರಸಾದ್ ಪ್ರಪಾತ ಎಂಬ ಚಿತ್ರವನ್ನೂ ನಿರ್ದೇಶಿಸಿದ್ದಾರೆ.

ಹಿನ್ನಲೆ ಸಂಗೀತ : ಅವಿನಾಶ್ & ಶ್ರೀರಾಮ್
ಫೈಯಾಜ್ ಖಾನ್ ಅವರ ಶಿಷ್ಯಂದಿರಾದ ಇವರಿಬ್ಬರು ಕಳೆದ ಎರಡು ವರ್ಷಗಳ ಹಿಂದೆ, ತಮ್ಮ ಸಂಗೀತದ ಪಯಣವನ್ನು ಪ್ರಾರಂಭಿಸಿದರು. ಜರ್ಮನ್ ಕೇಳುಗರಿಗಾಗಿ ಹೊರ ತಂದ ಧ್ಯಾನ ಸಂಗೀತದ ಆಲ್ಬಮ್, ಇವರ ಸಂಗೀತದ ಕೃಷಿಯಲ್ಲಿ ಮುಖ್ಯವಾದದ್ದು. ‘ಉಸಿರಿಗಿಂತ ನೀನೇ ಹತ್ತಿರ’ ಎಂಬ ಇನ್ನೂ ಬಿಡುಗಡೆಯಾಗದ ಹೊಸ ಕನ್ನಡ ಚಲನಚಿತ್ರದಲ್ಲಿ ಇವರಿಬ್ಬರೂ ನೀಡಿರುವ ಸಂಗೀತ, ಕೇಳುಗರ ಮನ ತಣಿಸಲು ಕಾಯುತ್ತಿದೆ.
