Description

ಲೇಖಕರು : ದೇವನೂರು ಮಹಾದೇವ
ಬರೆದದ್ದು ಕಡಿಮೆ ಎನಿಸಿದರೂ ಕನ್ನಡ ಸಾಹಿತ್ಯದ ಮೇಲೆ ಅಪಾರ ಪ್ರಭಾವ ಬೀರಿರುವ ದೇವನೂರು ಮಹಾದೇವ ನಾಡಿನ ಸಾಕ್ಷಿಪ್ರಜ್ಞೆಗಳಲ್ಲೊಬ್ಬರು. ಕನ್ನಡ ಕಥಾಸಾಹಿತ್ಯಕ್ಕೆ ಹೊಸ ದಿಕ್ಕು-ದೆಸೆಗಳನ್ನು ತೋರಿಸಿದ ದೇವನೂರ ಮಹಾದೇವ ನವ್ಯೋತ್ತರ ಸಾಹಿತ್ಯ ಸಂದರ್ಭದ ಅಗ್ರಗಣ್ಯ ಲೇಖಕರು. ಹುಟ್ಟಿದ್ದು ಜೂನ್ ೬, 1948ರಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದ ಎಂ.ಎ. (ಕನ್ನಡ) ಪದವಿ (1974), 'ನರ' ಪತ್ರಿಕೆಯ ಸಂಪಾದಕರಾಗಿದ್ದರು. (1972-74), ದ್ಯಾವನೂರು ಕಥಾಸಂಕಲನ (1973), ಒಡಲಾಳ, ಕುಸುಮಬಾಲೆ (ಕಾದಂಬರಿಗಳು). 'ಒಡಲಾಳ' ಕಾದಂಬರಿಗೆ ಕಲ್ಕತ್ತಾದ ಭಾರತೀಯ ಭಾಷಾ ಪರಿಷತ್ತಿನ ಪ್ರಶಸ್ತಿ (1984) ಬಂದಿದೆ. ಗಾಂಧಿ ಮತ್ತು ಮಾವೋ ಕೃತಿ ಅನುವಾದ ಕೂಡ ಮಾಡಿದ್ದಾರೆ.

ಲೇಖಕರು: ಡಾಲಿ ಧನಂಜಯ
ಡಾಲಿ ಧನಂಜಯ ಕನ್ನಡ ಮತ್ತು ಭಾರತೀಯ ಸಿನಿಮಾದ ಜನಪ್ರಿಯ ನಟ ಮತ್ತು ರಂಗ ಕಲಾವಿದ. ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿದ ನಂತರ 2013 ರಲ್ಲಿ, ಡೈರೆಕ್ಟ್ರ್ಸ್ ಸ್ಪೆಷಲ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಅರಸೀಕೆರೆ ಬಳಿ ಕಲ್ಲೇನಹಳ್ಳಿ ಗ್ರಾಮದಲ್ಲಿ ಜನಿಸಿ, ಸೇಂಟ್ ಮೇರಿಸ್ ಹೈ ಸ್ಕೂಲಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ಮುಂದೆ ಎಂಜಿನೀಯರಿಂಗ್ ಓದಿದರು. ಟಗರು, ಅಲ್ಲಮ, ಪಾಪ್ಕಾರ್ನ್ ಮಂಕಿ, ಟೈಗರ್ ಮುಂತಾದ ಚಿತ್ರಗಳಿಂದ ಈಗಾಗಲೇ ಬಾಕ್ಸ್ ಆಫೀಸ್ ಮತ್ತು ಚಿತ್ರ ವಿಮರ್ಶಕರ ಮನ ಎರಡನ್ನೂ ಗೆದ್ದಿದ್ದಾರೆ. ಡೈರೆಕ್ಟರ್ಸ್ ಸ್ಪೆಷಲ್ ಚಿತ್ರದ ಇವರ ವಿಶೇಷ ಪಾತ್ರ ಎಲ್ಲರೂ ಇವರನ್ನು ಪ್ರೀತಿಯಿಂದ ಸ್ಪೆಷಲ್ ಆಕ್ಟರ್ ಎಂದು ಕರೆಯುವಂತೆ ಮಾಡಿದೆ. ಅಲ್ಲದೆ ಇವರು ಆಯ್ಕೆ ಮಾಡಿಕೊಳ್ಳುವ ಕ್ಲಾಸಿಕ್ ಸಿನಿಮಾಗಳಿಂದ ಮತ್ತು ನಾಟಕಗಳಿಂದ ಕ್ಲಾಸಿಕ್ ಆಕ್ಟರ್ ಎಂದೂ ಗುರುತಿಸಲ್ಪಡುತ್ತಾರೆ. ಟಗರು ಚಿತ್ರ ಇವರಿಗೆ ಜನಮನ್ನಣೆ ಮತ್ತು ಅಭಿಮಾನಿಗಳ ಪ್ರೀತಿಯನ್ನು ತಂದು ಕೊಟ್ಟಿದೆ.

ಸಂಗೀತ : ಕೆ ಜಿ ಶ್ರೀಕಾಂತ್
ಶ್ರೀಕಾಂತ್ ಓದಿದ್ದು ಮೆಕ್ಯಾನಿಕಲ್ ಎಂಜಿನೀಯರಿಂಗ್ ಆದರೂ ಸಾಫ್ಟ್ ವೇರ್ ಇಂಜಿನೀಯರ್ ವೃತ್ತಿಯನ್ನೇ ಆರಿಸಿ ಕೊಂಡಿದ್ದಾರೆ. ಒಗಟುಗಳನ್ನು ಬಿಡಿಸುವುದು, ಆಧುನಿಕ ತಂತ್ರಜ್ಞಾನದ ಬಗ್ಗೆ ಕುತೂಹಲ, ಅನ್ವೇಷಣೆ, ಫೋಟೋಗ್ರಫಿ ಇತರೆ ಇವರ ಹವ್ಯಾಸಗಳಾಗಿವೆ. ಅಷ್ಟೇ ಅಲ್ಲದೆ ಸಂಗೀತ ಸಂಯೋಜನೆ ಅದರಲ್ಲೂ ಹಿನ್ನೆಲೆ ಸಂಗೀತ ನಿರ್ದೇಶನದತ್ತ ಅಪಾರ ಒಲವು ಹೊಂದಿದ್ದಾರೆ.
Reviews
There are no reviews yet.