fbpx

All profits go to girls in Kannada Medium Schools

ಕಾಯಕವೇ ಕೈಲಾಸ

ಕಾಯಕವೇ ಕೈಲಾಸ

Set in the city of new York, this story is about two software engineers of India who have different perspectives on work and life. A must listen to story by the young writer Vikram Hatwar.

39.00

What’s in this Kannada Audiobook?

Buy Kelikatheya Kannada Audio Book.
Support a girl child studying in Kannada Medium School

The Kannada Audio book is produced to support the education of girls studying in Kannada Medium schools. Actors and Authors have not charged money for this project

Description

ಲೇಖಕರು: ವಿಕ್ರಮ್ ಹತ್ವಾರ್

ಕನ್ನಡದ ಯುವ, ಕವಿ ಲೇಖಕ ವಿಕ್ರಮ್ ಹತ್ವಾರ್. ಜಿರೋ ಮತ್ತು ಒಂದು ಅವರ ಪ್ರಥಮ ಕಥಾ ಸಂಕಲನ. ಕನ್ನಡ ಪ್ರಭ ಮತ್ತು ಪ್ರಜಾವಾಣಿ ಕಥಾ ಸ್ಪರ್ಧೆಯಲ್ಲಿ ಹಲವು ವರ್ಷ ಪ್ರಶಸ್ತಿಗಳನ್ನ ಗಳಿಸಿದ್ದಾರೆ . ಅವರ ಪ್ರಥಮ ಕಥಾ ಸಂಕಲನದಿಂದ ಆಯ್ದ ಕಾಯಕವೆ ಕೈಲಾಸ ಕತೆಯನ್ನಿಲ್ಲಿ ಬಳಸಿಕೊಳ್ಳಲಾಗಿದೆ.

ಓದಿದವರು: ರಕ್ಷಿತ್ ಶೆಟ್ಟಿ

ಯುವ ಸಿನೆಮಾ ತಾರೆ ಮತ್ತು ನಿರ್ದೇಶಕ. ಕನ್ನಡದ ಸದ್ಯದ ಚರ್ಚಿತ ಸಿನೆಮಾ ಉಳಿದವರು ಕಂಡಂತೆ ಚಿತ್ರದ ನಿರ್ದೇಶಕ ರಕ್ಷಿತ್ ಶೆಟ್ಟಿ. ತುಘಲಕ್, ನಮ್ಮ ಏರಿಯಾಲಿ ಒಂದ್ ದಿನ, ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ವಾಸ್ತು ಪ್ರಕಾರ ಇವರ ಅಭಿನಯದ ಇನ್ನಷ್ಟು ಪ್ರಮುಖ ಚಿತ್ರಗಳು. ಕನ್ನಡದ ಯುವ ಕತೆಗಾರ ವಿಕ್ರಮ್ ಹತ್ವಾರರ ಕಾಯಕವೇ ಕೈಲಾಸ ಕತೆಯನ್ನ ನಮಗಾಗಿ ರಕ್ಷಿತ್ ಓದಿದ್ದಾರೆ.

ಹಿನ್ನೆಲೆ ಸಂಗೀತ: ನದೀಮ್ - ರಾಜೇಶ್

ನದೀಮ್ ಮತ್ತು ರಾಜೇಶ್ - ಬೆಂಗಳೂರಿನಲ್ಲಿರುವ ಯುವ ಸಂಗೀತ ನಿರ್ದೇಶಕರು. ಸಂಗೀತದತ್ತ ಅಪಾರ ಆಸಕ್ತಿಯನ್ನಿರಿಸಿಕೊಂಡಿರುವ ಸಾಫ್ಟ್ ವೇರ್ ಇಂಜಿನಿಯರ್ಸ್. "ನನ್ನ ಕನಸಲಿ’ ಎಂಬ ಇವರ ನಿರ್ದೇಶನದ ಹಾಡು, ಯೂ ಟ್ಯೂಬ್ ಮತ್ತು ಫೇಸ್ ಬುಕ್ಕಿನಲ್ಲಿ ಕೇಳುಗರಿಗೆ ಆನಂದ ನೀಡಿತ್ತು. ನಂತರ ‘ಸುಳ್ಳೇ ಸತ್ಯ’ ಎಂಬ ಕಿರುಚಿತ್ರದ ಎರಡು ಹಾಡುಗಳಿಗೆ ಕೂಡ ಸಂಗೀತ ನೀಡಿದರು. ಈ ಕಿರುಚಿತ್ರವು ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಈಗ ದಕ್ಷಿಣಭಾರತದ ಕೆಲವು ಚಲನಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವುದಲ್ಲದೆ, ಆನೇಕ ಆನ್ಲೈನ್ ಸಂಗೀತಕ್ಕೆ ನೆರವು ನೀಡುತ್ತಿದ್ದಾರೆ

KN
Share via
Copy link