fbpx

All profits go to girls in Kannada Medium Schools

Sruthi Hariharan reads 'Ogatu,' A Kannada story about love and womanhood from Vaidehi's book

Sruthi Hariharan reads 'Ogatu,' A Kannada story about love and womanhood from Vaidehi's book

Listen to Sruthi Hariharan and the brillance of Vaidehi

Share this Kannada Audio Book Now

Buy Kelikatheya Kannada Audio Book & Support a girl child studying in Kannada Medium School

Price: 49 only

Shubha is a warm and caring middle aged woman who has always stayed close to home. She loves and cares for everyone around her and takes special care to ensure that everyone is well taken care of. But when she suddenly visits her younger relative, the youngster is pleasantly surprised yet intrigued by Shubha’s behavior. Is there something she is trying to hide? The reason for her sudden visit and quick departure is left to the imagination. Vaidhei’s Kannada story explores this theme of trust and love in a subtle and thought-provoking way. The story is brought to life by the talented Sruthi Hariharan, who narrates with skill and emotion, while the music is composed by the KG Chandrakant. Whether you’re a fan of Kannada stories or just looking for a new audio book to enjoy, this is a must-listen

ಸ್ತ್ರೀಲೋಕದ ಕಥನವನ್ನು ಗಟ್ಟಿಯಾಗಿ ಕನ್ನಡ ಸಾಹಿತ್ಯಕ್ಕೆ ತೆರೆದಿಟ್ಟ ವೈದೇಹಿಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು. ಮೂಲ ಹೆಸರು ಜಾನಕಿ ಶ್ರೀನಿವಾಸಮೂರ್ತಿ. ಹುಟ್ಟಿದ್ದು ೧೯೪೫ ರ ಫೆಬ್ರವರಿ ೧೨ ರಂದು. ವೈದೇಹಿ ಅವರ ಬರಹದ ಸ್ವರೂಪ ವೈವಿಧ್ಯದಿಂದ ಕೂಡಿದೆ. 1979ರಲ್ಲಿ ಮೂಡಿದ ‘ಮರ ಗಿಡ ಬಳ್ಳಿ’ಯಿಂದ ಮೊದಲುಗೊಂಡು, ಅಂತರಂಗದ ಪುಟಗಳು, ಗೋಲ, ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗೆ, ಅಮ್ಮಚ್ಚಿ ಎಂಬ ನೆನಪು, ಹಗಲು ಗೀಚಿದ ನೆಂಟ, ಕ್ರೌಂಚ ಪಕ್ಷಿಗಳು ಇವು ಅವರ ಪ್ರಮುಖ ಕಥಾಸಂಕಲನಗಳು. ಬಿಂದು ಬಿಂದಿಗೆ, ಪಾರಿಜಾತ ಹೂವ ಕಟ್ಟುವ ಕಾಯಕ (ಕವನ ಸಂಕಲನ), ಅಸ್ಪೃಶ್ಯರು (ಕಾದಂಬರಿ), ಮಲ್ಲಿನಾಥನ ಧ್ಯಾನ, ಮೇಜು ಮತ್ತು ಬಡಗಿ, ಹರಿವ ನೀರು (ಪ್ರಬಂಧ ಸಂಕಲನಗಳು), ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ, ಸೇಡಿಯಾಪು ನೆನಪುಗಳು, ಮುಂತಾದ ಕೆಲ ಪುಟಗಳು (ಆತ್ಮಚರಿತ್ರ ನಿರೂಪಣೆ), ಭಾರತೀಯ ಮಹಿಳೆಯರ ಸ್ವಾತಂತ್ರ್ಯ ಹೋರಾಟ, ಬೆಳ್ಳಿಯ ಸಂಕೋಲೆಗಳು, ಮೂವರು ಅಕ್ಕತಂಗಿಯರು, ಸಂಗೀತ ಸಂವಾದ, ಸೂರ್ಯ ಕಿನ್ನರಿಯರು (ಅನುವಾದ), ಜಾತ್ರೆ (ಸ್ಕೃತಿಕಥನ) ಅವರ ಪ್ರಕಟಿತ ಕೃತಿಗಳು. ಇವಲ್ಲದೆ 15 ಮಕ್ಕಳ ನಾಟಕಗಳು, ಮಕ್ಕಳ ಕಥಾ ಸಂಗ್ರಹ, ಮಕ್ಕಳ ಕಥೆಗಳ ಸಂಪಾದಿತ ಸಂಗ್ರಹ ಪ್ರಕಟಿಸಿದ್ದಾರೆ. ಕ್ರೌಂಚ ಪಕ್ಷಿಗಳು ಎಂಬ ಕಥಾಸಂಕಲನಕ್ಕೆ ೨೦೦೯ರಲ್ಲಿ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ.

ಶ್ರುತಿ ಹರಿಹರನ್ ಸಿನೆಮಾ ನಟಿ ಮತ್ತು ನಿರ್ಮಾಪಕಿಯಾಗಿ ಪ್ರಮುಖವಾಗಿ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿರುವವರು. ಶ್ರುತಿಯವರಿಗೆ ಒಂದು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ, ಮೂರು ಬಾರಿ ದಕ್ಷಿಣ ಸಿನೆಮಾ ರಂಗದ ಫಿಲಂ ಫೇರ್ ಪ್ರಶಸ್ತಿ, ಒಂದು ಬಾರಿ ಎಸ್ಐಐಎಮ್ಏ ಪ್ರಶಸ್ತಿ ಒಳಗೊಂಡಂತೆ ಹಲವಾರು ಪ್ರಶಸ್ತಿಗಳು ದೊರೆತಿವೆ. ಅಷ್ಟೇ ಅಲ್ಲದೆ ನಾತಿಚರಾಮಿ ಚಿತ್ರದಲ್ಲಿನ ಇವರ ಅಭಿನಯವನ್ನು 66 ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶೇಷವಾಗಿ ಉಲ್ಲೇಖಿಸಲಾಗಿತ್ತು. 2012 ರಲ್ಲಿ ತೆರೆಕಂಡ ಮಲಯಾಳಂ ಚಿತ್ರ ಕಂಪನಿ ಇವರ ಮೊದಲನೇ ಚಿತ್ರ ಮತ್ತು ಕನ್ನಡದಲ್ಲಿ ಲೂಸಿಯಾ ಇವರ ಮೊದಲ ಚಿತ್ರ. ಗೋಧಿ ಬಣ್ಣ ಸಾಧಾರಣ ಮೈ ಕಟ್ಟು, ಊರ್ವಿ, ನಾತಿಚರಾಮಿ ಮತ್ತು ಬ್ಯೂಟಿಫುಲ್ ಮನಸುಗಳು ಚಿತ್ರಗಳು ಶ್ರುತಿಯವರಿಗೆ ಚಿತ್ರ ವಿಮರ್ಶಕರ ಮೆಚ್ಚುಗೆ ಮತ್ತು ಜನಮನ್ನಣೆ ಎರಡನ್ನೂ ದೊರಕಿಸಿಕೊಟ್ಟಿವೆ. ಶ್ರುತಿ ನಮಗಾಗಿ ಒಗಟು ಕತೆಯನ್ನು ಓದಿದ್ದಾರೆ.

ಚಂದ್ರಕಾಂತ್ ಒಂದು ದೊಡ್ಡ ಬಹುರಾಷ್ಟ್ರೀಯ ಕಂಪನಿಯಲ್ಲಿ ಸಾಫ್ಟ್-ವೇರ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪ್ರಾಥಮಿಕ ಹಂತದ ತರಬೇತಿ ಪಡೆದಿರುವ ಚಂದ್ರಕಾಂತ್ ಸಿನೆಮಾ ಮತ್ತು ಸಂಗೀತದ ಕಟ್ಟಾಭಿಮಾನಿ.

Kannada Audio book supports girls' education in Kannada medium schools. Actors and authors donate their services.

Buy Kelikatheya Kannada Audio Book.
Support a girl child studying in Kannada Medium School

The Kannada Audio book is produced to support the education of girls studying in Kannada Medium schools. Actors and Authors have not charged money for this project

KN
Share via
Copy link