ನಿಮ್ಮ ಮಕ್ಕಳಿಗಾಗಿ ಅತ್ಯುತ್ತಮ ಕನ್ನಡ ಕತೆಯ ಹುಡುಕಾಟದಲ್ಲಿ ನೀವಿದ್ದರೆ ಇದು ಸರಿಯಾದ ಜಾಗದಲ್ಲಿದ್ದೀರಿ. ಕನ್ನಡದ ಕೆಲವು ಒಳ್ಳೆಯ ಮಕ್ಕಳ ಕತೆಗಳನ್ನ ಆಡಿಯೋ ಬುಕ್ ರೂಪದಲ್ಲಿ ಮೊದಲು ತಂದ ಹೆಗ್ಗಳಿಕೆ ಕೇಳಿ ಕತೆಯ ತಂಡದ್ದು. ಖ್ಯಾತ ಲೇಖಕರ ಮಕ್ಕಳ ಕತೆಗಳನ್ನ ಸುಪ್ರಸಿದ್ದ ಕಲಾವಿದರಾದ ಎಮ್ ಡಿ ಪಲ್ಲವಿ, ಗಿರಿಜಾ ಲೋಕೇಶ್ ಮತ್ತು ವಸಿಷ್ಠ ಸಿಂಹ ನಿಮಗಾಗಿ ಓದಿದ್ದಾರೆ. ಮಕ್ಕಳ ಕುತೂಹಲ ಹೆಚ್ಚಿಸಲು ಸೂಕ್ತ ಸಂಗೀತವನ್ನೂ ಕತೆಯೊಂದಿಗೆ ಸಂಯೋಜಿಸಲಾಗಿದೆ.
ಈ ಕತೆಗಳು ಕೇವಲ ನಿಮ್ಮ ಮಕ್ಕಳಿಗಷ್ಟೇ ಅಲ್ಲದೇ ಗಡಿನಾಡ ಶಾಲೆಯಲ್ಲಿ ಓದುತ್ತಿರುವ ಹೆಣ್ಣು ಮಕ್ಕಳಿಗೂ ನೆರವಾಗಲಿದೆ. ಹೇಗೆ ಅಂತೀರಾ?
ಈ ಕತೆಗಳ ಮಾರಾಟದಿಂದ ಬಂದ ಸಂಪೂರ್ಣ ಲಾಭವನ್ನು ಗಡಿನಾಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅವಿರತ ಪ್ರತಿಷ್ಠಾನದ ಮೂಲಕ ಬಳಸಲಾಗುವುದು.
ಕೇಳಿ ಕತೆಯದಲ್ಲಿ ಕೇವಲ ಮಕ್ಕಳ ಕತೆಗಳಷ್ಟೇ ಅಲ್ಲದೇ ಹಿರಿಯರಿಗೂ ಕೆಲವು ಅಪರೂಪದ ಕತೆಗಳಿವೆ. ಆ ಕತೆಗಳ ಕೇಳಲು ಇಲ್ಲಿ ಕ್ಲಿಕ್ ಮಾಡಿ
© 2020 ಕೇಳಿ ಕತೆಯ | Developed by Prajwal Kumar