ಕನ್ನಡದ ಅತ್ಯುತ್ತಮ ಕತೆಗಳನ್ನ ಆಡಿಯೋ ಬುಕ್ ರೂಪದಲ್ಲಿ ಜಗತ್ತಿನೆದುರು ತೆರೆದಿಡುವ ಪ್ರಯತ್ನ- ಕೇಳಿ ಕತೆಯ. ಪ್ರತಿಭಾವಂತ ಕತೆಗಾರರು ಬರೆದ ಬೇರೆ ಬೇರೆ ಪ್ರಕಾರದ ವಿಶಿಷ್ಠ ಕತೆಗಳನ್ನ ಈ ಆಡಿಯೋ ಬುಕ್ ಯೋಜನೆಗೆ ಆರಿಸಿಕೊಳ್ಳಲಾಗಿದೆ. ವಿಶೇಷವೆಂದರೆ ಕನ್ನಡ ಚಿತ್ರರಂಗದ ಖ್ಯಾತನಾಮರು ಈ ಕತೆಗಳಿಗೆ ದನಿಯಾಗಿದ್ದಾರೆ. ಇಂತಹ ಕತೆಗಳಿಗೆ ಯುವ ಪ್ರತಿಭಾವಂತ ಸಂಗೀತ ನಿರ್ದೇಶಕರು ಸಂಗೀತ ಸಂಯೋಜನೆ ನೀಡುವ ಮೂಲಕ ಈ ಕತೆಗಳಿಗೆ ಇನ್ನೊಂದು ಆಯಾಮ ನೀಡಿದ್ದಾರೆ. ನಿಮಗೆ ಖಂಡಿತ ಇಷ್ಟವಾಗುವ ಈ ಆಡಿಯೊ ಕತೆಗಳನ್ನ ಕೇಳಿಕತೆಯ ಅಂತರ್ಜಾಲ ತಾಣದಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು.
ಕೇಳಿ ಕತೆಯ ಯೋಜನೆಗೆ ಕತೆಗಳನ್ನ ಹೇಗೆ ಆಯ್ದುಕೊಳ್ಳಲಾಗಿದೆ?
ಕನ್ನಡದಲ್ಲಿ ಸಾವಿರಾರು ಸಣ್ಣ ಕಥಾ ಸಂಕಲನಗಳು ಪ್ರಕಟವಾಗಿವೆ. ಈ ಕಥಾ ಸಾಗರದಲ್ಲಿ ಕೆಲವೇ ಕತೆಗಳನ್ನ ಆಯುವುದು ಸುಲಭಸಾಧ್ಯವಲ್ಲ. ಆದರೆ ಕತೆಯ ಆಯ್ಕೆಯಲ್ಲಿ ಸಾಕಷ್ಟು ವೈವಿಧ್ಯತೆಯನ್ನು ಕಾಪಾಡಿಕೊಳ್ಳಲಾಗಿದೆ. ಹಿರಿ ಮತ್ತು ಕಿರಿ ಬರಹಗಾರರ ಸಮ್ಮಿಲನ ಇಲ್ಲಿದೆ.
ಕನ್ನಡ ಆಡಿಯೊ ಬುಕ್ ನ ವಿಶೇಷತೆ ಏನು??
ಸಾಹಿತಿಗಳು ಮತ್ತು ಚಿತ್ರ ನಟರು ಒಟ್ಟಾಗಿ ಬೆಂಬಲಿಸಿದ ಈ ಯೋಜನೆ ಕನ್ನಡದಲ್ಲೇ ಮೊದಲು
ಈ ಕತೆಗಳನ್ನ ನೀವು ಕೇಳಿದಾಗ ಕತೆಯ ಆಯ್ಕೆ, ಧ್ವನಿಯ ಗುಣಮಟ್ಟ, ಹಿನ್ನೆಲೆ ಸಂಗೀತಕ್ಕೆ ಪಟ್ಟ ಶ್ರಮ ನಿಮ್ಮ ಅರಿವಿಗೆ ಬರಲಿದೆ.
ಈ ಯೋಜನೆಯ ಇನ್ನೊಂದು ವಿಶೇಷವೆಂದರೆ ಇಲ್ಲಿನ ಆಡಿಯೋ ಕತೆಗಳ ಮಾರಾಟದಿಂದ ಬಂದ ಸಂಪೂರ್ಣ ಲಾಭವನ್ನ ಗಡಿನಾಡ ಕನ್ನಡ ಶಾಲೆಯ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಬಳಸಲಾಗುವುದು. ಅವಿರತ ಟ್ರಸ್ಟ್ ನ ಮೂಲಕ ಈ ಕಾರ್ಯ ಕೈಗೆತ್ತಿಕೊಳ್ಳಲಾಗುವುದು
೨೦೧೪ ರಲ್ಲಿ ಪ್ರಾರಂಭವಾದ ಈ ಯೋಜನೆಗೆ ಇದುವರೆಗೆ ಇಲ್ಲಿ ಭಾಗಿಯಾದ ಸಾಹಿತಿಗಳಾಗಲೀ, ಚಿತ್ರ ನಟರಾಗಲೀ ಯಾವುದೇ ಪ್ರತಿಫಲಾಕ್ಷೆ ಇಲ್ಲದೆ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ಮೊದಲ ಬಾರಿಗೆ ಬಂದ ಆರು ಕತೆಗಳ ಆಡಿಯೋ ಸಿ.ಡಿ ಗೆ ನಾಡಿನಾದ್ಯಂತ ಎಲ್ಲ ವರ್ಗದ ಜನರಿಂದ ಬರಪೂರ ಬೆಂಬಲ ಪ್ರಾಪ್ತವಾಗಿದೆ.
ಈ ಆಡಿಯೋ ಬುಕ್ ಯೋಜನೆಗೆ ಸಿಕ್ಕ ಜನರ ಪ್ರತಿಸ್ಪಂದನೆ ತಿಳಿಯಲು ಈ ಕೆಳಗಿನ ಲಿಂಕ್ ಒತ್ತಿ.
ಈ ಕೆಳಗಿನ ಲಿಂಕ್ ಒತ್ತಿ Click https://www.facebook.com/KeliKatheya https://www.facebook.com/KeliKatheya
ಮಾಧ್ಯಮದಲ್ಲಿ ಬಂದ ವರದಿಗಳನ್ನ ಓದಲು ಈ ಲಿಂಕ್ ಒತ್ತಿ https://kelikatheya.com/Press.html
ಮೊದಲ ಸಂಚಿಕೆಯ ಜೊತೆಗೆ ನಾವೀಗ ಎರಡನೆ ಸಂಚಿಕೆಯೊಂದಿಗೆ ನಿಮ್ಮೆದುರು ಬಂದಿದ್ದೇವೆ. ಕನ್ನಡದ ಆಯ್ದ ೧೩ ಕತೆಗಳ ಆಡಿಯೋ ರೂಪದಲ್ಲಿ ನಿಮ್ಮೆದುರಿಗಿದೆ. ನಾಡಿನಾದ್ಯಂತ ಎಲ್ಲ ವರ್ಗದ ಜನರಿಂದ ಬರಪೂರ ಬೆಂಬಲ ಪ್ರಾಪ್ತವಾಗಿದೆ.
ಅಷ್ಟೇ !
ಕೇಳಿ ಕತೆಯ ಕನ್ನಡದ ಅತ್ಯುತ್ತಮ ಕತೆಗಳನ್ನ ಆಡಿಯೋ ಬುಕ್ ರೂಪದಲ್ಲಿ ಜಗತ್ತಿನೆದುರು ತೆರೆದಿಡುವ ಪ್ರಯತ್ನ- . ಪ್ರತಿಭಾವಂತ ಕತೆಗಾರರು ಬರೆದ ಬೇರೆ ಬೇರೆ ಪ್ರಕಾರದ ವಿಶಿಷ್ಠ ಕತೆಗಳನ್ನ ಈ ಆಡಿಯೋ ಬುಕ್ ಯೋಜನೆಗೆ ಆರಿಸಿಕೊಳ್ಳಲಾಗಿದೆ. ವಿಶೇಷವೆಂದರೆ ಕನ್ನಡ ಚಿತ್ರರಂಗದ ಖ್ಯಾತನಾಮರು ಈ ಕತೆಗಳಿಗೆ ದನಿಯಾಗಿದ್ದಾರೆ.ww.aviratha.org ಇಲ್ಲಿನ ಆಡಿಯೋ ಕತೆಗಳ ಮಾರಾಟದಿಂದ ಬಂದ ಸಂಪೂರ್ಣ ಲಾಭವನ್ನ ಗಡಿನಾಡ ಕನ್ನಡ ಶಾಲೆಯ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಬಳಸಲಾಗುವುದು. ಅವಿರತ ಟ್ರಸ್ಟ್ ನ ಮೂಲಕ ಈ ಕಾರ್ಯ ಕೈಗೆತ್ತಿಕೊಳ್ಳಲಾಗುವುದು.
ನಮ್ಮದೊಂದು ಕಲೆಯ ಹುಚ್ಚು ಅಂಟಿಕೊಂಡಿರುವ ಗೆಳೆಯರ ಬಳಗ . ಈ ಪ್ರಯತ್ನದಲ್ಲಿ ನಮ್ಮೊಂದಿಗೆ ಹಲವಾರು ಮಂದಿ ಕೈಜೋಡಿಸಿದ್ದಾರೆ.
Mukund Setlur |Sharath Padaru| Kiran Manjunath | Nitesh Kuntady | Satish Gowda
Harish Mallya | Pramod Patgar
ಶೀರ್ಷಿಕೆ ಗೀತೆ : ಭರತ್ ಬಿ ಜೆ Bharat BJ
ಸಾರ್ವಜನಿಕ ಸಂಪರ್ಕ : ರಘು
© 2020 ಕೇಳಿ ಕತೆಯ | Developed by Prajwal Kumar