fbpx

All profits go to girls in Kannada Medium Schools

Raj B Shetty reads for a Kannada Audio Book

Raj B Shetty reads for a Kannada Audio Book

Share this Kannada Audio Book Now

Yashwant Vithoba Chittal's award winning story

Price: 49 only

A writer’s child asks him to include her in one of his stories. Although he agrees he finds himself at odds.

How to differentiate between fact and fiction. Does the book he writes enrich his life in any way? One of Yashwant vithoba chittal most well-known short stories, it examines the tension between the author’s real life and the fictional universe he creates.

Additionally, actor Raj Shetty reads the story , while Prashanth Pachatu sets the music.

ತಮ್ಮ ಸಣ್ಣಕತೆಗಳ ಮೂಲಕ ಆಧುನಿಕ ಕನ್ನಡ ಕಥಾಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದ ಯಶವಂತ ಚಿತ್ತಾಲ ಹುಟ್ಟಿದ್ದು ಆಗಸ್ 3, 1928 ರಂದು ಉತ್ತರ ಕನ್ನಡ ಜಿಲ್ಲೆಯ ಹನೇಹಳ್ಳಿಯಲ್ಲಿ. ಈ ಪುಟ್ಟ ಹಳ್ಳಿ ಚಿತ್ತಾಲರ ಅಂತರಂಗದ ಒಂದು ಅವಿಭಾಜ್ಯ ಅಂಗವಾಗಿದೆ. ಅವರ ಕಥೆಗಳಲ್ಲೂ ಕಾಣಸಿಗುತ್ತದೆ. ಮಾರ್ಕ್ಸ್, ಎರಿಕ್ ಪ್ರಾಂ, ಎಡಿಂಗ್ ಟನ್, ಹಕ್ಸ್ಲಿ, ಫ್ರಾಯ್ಡ್, ಎಡ್ಲರ್, ಮುಂತಾದ ಹಲವು ಧೀಮಂತರ ವಿಚಾರಧಾರೆಗಳಿಗೆ ತಮ್ಮ ಮನಸ್ಸನ್ನು ತೆರೆದಿಟ್ಟ ಚಿತ್ತಾಲರು ತಮ್ಮ ಬಹುಪಾಲು ಕತೆ ಕಾದಂಬರಿಗಳನ್ನು ಕನ್ನಡ ನಾಡಿನ ಹೊರಗಿದ್ದೇ ಬರೆದಿದ್ದಾರೆ. ಸಂದರ್ಶನ, ಅಬೋಲಿನ ಆಟ, ಕಥೆಯಾ ದಳು ಹುಡುಗಿ, ಬೇನ್ಮಾ, (ಕಥಾಸಂಕಲನಗಳು) ಮೂರು ದಾರಿಗಳು, ಶಿಕಾರಿ, ವೇದ (ಕಾದಂಬರಿಗಳು), 'ಶಿಕಾರಿ' ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ (1980) 'ಕಥೆಯಾದಳು ಹುಡುಗಿ' ಕಥಾಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. 'ಸೃಜನಶೀಲತೆ ಮತ್ತು ನಾನು' ಅವರ ವೈಚಾರಿಕ ಕೃತಿ.

ಮಂಗಳೂರಿನ 92.7 ಬಿಗ್ ಎಫ್ ಎಮ್ ನಲ್ಲಿ ರೇಡಿಯೋ ಜಾಕಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ರಾಜ್ ಬಿ ಶೆಟ್ಟಿ ಮುಂದೆ ರಂಗ ಕಲಾವಿದರಾದರು. ಆದರೆ ಅವರ ನಿಜವಾದ ಪ್ರತಿಭೆ ಚಿತ್ರಕತೆ ಮತ್ತು ನಿರ್ದೇಶನದಲ್ಲಿದೆ ಎನ್ನುವ ಅರಿವು ಮೂಡಿ ಅದೇ ಅವರನ್ನು ಹೆಚ್ಚಾಗಿ ಮನ ಸೆಳೆದ ಕ್ಷೇತ್ರವಾಯಿತು. 'ಒಂದು ಮೊಟ್ಟೆಯ ಕತೆ' ಯಾರೂ ಊಹಿಸಿರದ ರೀತಿಯಲ್ಲಿ ಬ್ಲಾಕ್ ಬಸ್ಟರ್ ಹಿಟ್ ಸಿನೆಮಾ ಆಗಿ ಗೆದ್ದು ಅವರಿಗೆ ಕೀರ್ತಿ ತಂದುಕೊಟ್ಟಿತು. ಕನ್ನಡ ಸಾಹಿತ್ಯದ ಕಟ್ಟಾಭಿಮಾನಿ ರಾಜ್ ಬಿ ಶೆಟ್ಟಿ 'ಕತೆಯಾದಳು ಹುಡುಗಿ' ಎನ್ನುವ ಕತೆಯನ್ನು ಸಂತೋಷದಿಂದಲೇ ನಮಗಾಗಿ ಓದಿದ್ದಾರೆ.

ಪ್ರಶಾಂತ್ ವೃತ್ತಿಯಿಂದ ಒಬ್ಬ ಸಾಫ್ಟ್ ವೇರ್ ಡೆವೆಲಪರ್ ಆಗಿದ್ದಾರೆ. ಆದರೆ ಒಬ್ಬ ಶಾಸ್ತ್ರೀಯ ಪಿಯಾನೋ ವಾದಕನಾಗಿ ಮತ್ತು ಹಾಡುಗಾರನಾಗಿ ಹಲವು ವರ್ಷಗಳಿಂದ ಸಂಗೀತದೊಂದಿಗೆ ಬೆಸೆದುಕೊಂಡು ಹಲವಾರು ಸಂಯೋಜನೆಗಳಿಂದ, ತಮ್ಮದೇ ಸ್ವತಂತ್ರ ಕೆಲಸಗಳಿಂದ ತಮಗಾಗಿ ಒಂದು ಅನನ್ಯವಾದ ಸ್ಥಾನವನ್ನು ರಚಿಸಿಕೊಂಡಿದ್ದಾರೆ. ಅವರ ಸಂಗೀತ ಸಂಯೋಜನೆಗಳು ಪಾಶ್ಚಾತ್ಯ ಪ್ರಭಾವಗಳೊಂದಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಂಪನ್ನು ಹದವಾಗಿ ಬೆರೆಸಿ ಅನನ್ಯವಾದ ಮಿಶ್ರಣವನ್ನು ಹೊರಹೊಮ್ಮಿಸುತ್ತವೆ. ತಮ್ಮ ವೃತ್ತಿಯೊಂದಿಗೆ ಸಂಗೀತದ ಸ್ವತಂತ್ರ ಯೋಜನೆಗಳನ್ನು ಕುಶಲತೆಯಿಂದ ನಿಭಾಯಿಸುತ್ತಲೇ ಲಂಡನ್ ಕಾಲೇಜ್ ಆಫ್ ಮ್ಯೂಸಿಕ್ ನಲ್ಲಿ ಪಿಯಾನೋ ಗ್ರೇಡ್ಸ್ ಕಲಿಯುತ್ತಿದ್ದಾರೆ.

Kannada Audio book supports girls' education in Kannada medium schools. Actors and authors donate their services.

Buy Kelikatheya Kannada Audio Book.
Support a girl child studying in Kannada Medium School

The Kannada Audio book is produced to support the education of girls studying in Kannada Medium schools. Actors and Authors have not charged money for this project

KN
Share via
Copy link